ಬದುಕು, ಸಂಬಂಧ ಕಟ್ಟಲು ಜನಪದದಿಂದ ಮಾತ್ರ ಸಾಧ್ಯಸಂಸ್ಕೃತಿ, ಬದುಕು ಹಾಗೂ ಸಂಬಂಧಗಳನ್ನು ಕಟ್ಟಲು ಜನಪದ ಸಾಹಿತ್ಯದಿಂದ ಮಾತ್ರ ಸಾಧ್ಯ ಎಂದು ಕ್ಷೇತ್ರ ಶಿಕ್ಷಣಾಧಿಕಾರಿ ಟಿ.ಆರ್. ರುದ್ರಪ್ಪ ಹೇಳಿದರು.ಪಟ್ಟಣದ ಗುರುಭವನದಲ್ಲಿ ಬೀರೂರು ಶೈಕ್ಷಣಿಕ ವಲಯದ 63ನೇ ಶಿಕ್ಷಕರ ದಿನಾಚರಣೆ ಅಂಗವಾಗಿ ಏರ್ಪಡಿಸಿದ್ದ "ಶಿಕ್ಷಣದಲ್ಲಿ ಜನಪದ ಸಂಭ್ರಮ " ಶೈಕ್ಷಣಿಕ ಕಾರ್ಯಾಗಾರ, ಕ್ರೀಡಾ ಮತ್ತು ಸಾಂಸ್ಕೃತಿಕ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.