ಪುರಾಣ ಪುಣ್ಯ ಕಥೆಗಳ ಅಂತರಾರ್ಥ ವಿಕೃತಿಗೊಳಿಸಿರುವುದು ವಿಷಾದಕರಕೊಪ್ಪ, ನಮ್ಮ ಸನಾತನ ಪರಂಪರೆಯಲ್ಲಿ ನಾವು ನಂಬಿಕೊಂಡು ಬಂದಿರುವ ಪುರಾಣ ಪುಣ್ಯ ಕಥೆಗಳ ನಿಜಾರ್ಥ ಅರಿಯದೆ ಅದನ್ನು ತಮಗೆ ಬೇಕಾದಂತೆ ತಿರುಚಿ ಅರ್ಥೈಸಿಕೊಂಡು ಅದರ ಅಂತರಾರ್ಥವನ್ನು ವಿಕೃತಿಗೊಳಿಸುತ್ತಿರುವುದು ವಿಷಾದದ ಸಂಗತಿ ಎಂದು ಉಡುಪಿಯ ಅಸೆಮ್ಸ್ ಶಿಕ್ಷಣ ಸಂಸ್ಥೆ ಪ್ರಾಂಶುಪಾಲರು, ಯಕ್ಷಗಾನ ತಾಳಮದ್ದಲೆ ಕ್ಷೇತ್ರದ ಪ್ರಸಿದ್ಧ ಅರ್ಥಧಾರಿ, ಯಕ್ಷಗಾನ ಪ್ರಸಂಗಕರ್ತ ಪವನ ಕಿರಣಕೆರೆ ಹೇಳಿದರು.