ಜಮೀನು ಗುರುತಿಸಿದರೆ ನಿವೇಶನ ನೀಡಲು ಶೀಘ್ರ ಕ್ರಮ: ಜಿ.ಎಚ್. ಶ್ರೀನಿವಾಸ್ತರೀಕೆರೆ, ಪುರಸಭಾ ವ್ಯಾಪ್ತಿಯಲ್ಲಿ ನೂರಾರು ಮಂದಿ ನಿವೇಶನ ರಹಿತರಿದ್ದು, ಪಟ್ಟಣ ವ್ತಾಪ್ತಿಯಲ್ಲಿ ಜಾಗದ ಅಭಾವವಿದೆ. ಪಟ್ಟಣಕ್ಕೆ ಹೊಂದಿಕೊಂಡಿರುವ ಅಕ್ಕಪಕ್ಕದ ಗ್ರಾಮಗಳಲ್ಲಿ ಎಲ್ಲಿಯಾದರೂ ಸರ್ಕಾರಿ ಅಥವಾ ಖಾಸಗಿ ವ್ಯಕ್ತಿಗಳಿಂದ ಪುರಸಭಾ ಆಡಳಿತ ಮಂಡಳಿ ಜಮೀನು ಗುರುತಿಸಿಕೊಟ್ಟರೆ ಸರ್ಕಾರದಿಂದ ಶೀಘ್ರ ಅನುಮೋದಿಸಿ ನಿವೇಶನ ಹಂಚುವ ವ್ಯವಸ್ಥೆ ಮಾಡಬಹುದು ಎಂದು ಶಾಸಕ ಜಿ.ಎಚ್. ಶ್ರೀನಿವಾಸ್ ಹೇಳಿದರು.