ಸೊಳ್ಳೆ ಮುಕ್ತ ಸಮಾಜಕ್ಕೆ ಎಲ್ಲರೂ ಕೈಜೋಡಿಸಬೇಕು: ವೈ.ಎಂ.ಲಲಿತ ಮನವಿನರಸಿಂಹರಾಜಪುರ, ಸೊಳ್ಳೆ ಮುಕ್ತ ಸಮಾಜ ನಿರ್ಮಿಸಲು ಎಲ್ಲರೂ ಕೈ ಜೋಡಿಸಬೇಕು ಎಂದು ಜಿಲ್ಲಾ ಆರೋಗ್ಯ ಶಿಕ್ಷಣಾಧಿಕಾರಿ ವೈ.ಎಂ.ಲಲಿತಾ ಮನವಿ ಮಾಡಿದರು.ತಾಲೂಕಿನ ಕಟ್ಟಿನಮನೆ ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಂಗಳವಾರ ನಡೆದ ವಿಶ್ವ ಸೊಳ್ಳೆ ದಿನಾಚರಣೆಯಲ್ಲಿ ಮಾತನಾಡಿ, ಪ್ರತಿವರ್ಷ ಆ.20 ರಂದು ವಿಶ್ವದಾದ್ಯಂತ ವಿಶ್ವ ಸೊಳ್ಳೆ ದಿನಾಚರಣೆ ನಡೆಸಲಾಗುತ್ತಿದ್ದು ಸೊಳ್ಳೆಗಳಿಂದ ಹರಡುವ ಕಾಯಿಲೆಗಳು, ಅವುಗಳ ಗುಣ ಲಕ್ಷಣಗಳು ಮತ್ತು ಸೊಳ್ಳೆ ನಿಯಂತ್ರಣದ ಬಗ್ಗೆ ಅರಿವು ಮೂಡಿಸುವುದೇ ಈ ಕಾರ್ಯಕ್ರಮದ ಉದ್ದೇಶ.