ದೇಶ ಅಸ್ತಿರಗೊಳಿಸುವ ಸಂಚು ವಿಫಲಗೊಳಿಸಲು ಜಾಗೃತರಾಗಿರಲು ಸಿ.ಟಿ.ರವಿ ಕರೆಚಿಕ್ಕಮಗಳೂರು, ಮಹಾತ್ಮ ಗಾಂಧಿ ಮತ್ತಿತರರ ಹೋರಾಟ, ತ್ಯಾಗ, ಬಲಿದಾನಗಳಿಂದ ದೇಶ ಸ್ವತಂತ್ರ ಗಳಿಸಿತು ಎಂಬುದು ಅರ್ಧ ಸತ್ಯ. ನಿಜವಾದ ಸತ್ಯ ಏನೆಂದರೆ, 1947ಕ್ಕಿಂತ ಪೂರ್ವದಲ್ಲೇ ವೀರ ಸಾವರ್ಕರ್ ನೇತೃತ್ವದಲ್ಲಿ ಅನೇಕ ಹೋರಾಟಗಾರರು ಧ್ವಜ ಹಾರಿಸುವ ಮೂಲಕ ದೇಶ ಸ್ವತಂತ್ರ ಗಳಿಸಿತ್ತು. ಆದರೆ, ಒಗ್ಗಟ್ಟಿನ ಕೊರತೆಯಿಂದ ಪರಕೀಯರು ದಾಳಿ ನಡೆಸಿದ ಪರಿಣಾಮ ಸ್ವತಂತ್ರ ರಕ್ಷಿಸಿಕೊಳ್ಳಲು ಸಾಧ್ಯವಾಗದೆ ದೇಶ ಮತ್ತೆ ಪರಕೀಯರ ಪಾಲಾಗಿತ್ತು ಎಂಬುದು ಪೂರ್ಣ ಸತ್ಯ ಎಂದು ವಿಧಾನ ಪರಿಷತ್ ಸದಸ್ಯ ಸಿ.ಟಿ. ರವಿ ಹೇಳಿದ್ದಾರೆ.