ಅರಣ್ಯ- ಕಂದಾಯ ಭೂಮಿ ಜಂಟಿ ಸರ್ವೆಗೆ ಗಿರೀಶ್ ಆಗ್ರಹಚಿಕ್ಕಮಗಳೂರು, ಅರಣ್ಯ ಒತ್ತುವರಿ, ಅಕ್ರಮ ಬಡಾವಣೆ, ಹೋಂ ಸ್ಟೇ, ರೆಸಾರ್ಟ್ ವಿರುದ್ಧ ಕ್ರಮಕ್ಕೆ ಮುಂದಾಗಿರುವ ರಾಜ್ಯ ಸರ್ಕಾರ ಅದಕ್ಕೂ ಮುನ್ನ ದಶಕಗಳಿಂದ ನೆನೆಗುದಿಗೆ ಬಿದ್ದಿರುವ ಅರಣ್ಯ ಮತ್ತು ಕಂದಾಯ ಇಲಾಖೆ ಜಮೀನಿನ ಜಂಟಿ ಸಮೀಕ್ಷೆ ಮಾಡಿ ಗೊಂದಲ ಬಗೆಹರಿಸಬೇಕು ಎಂದು ಹೋಂಸ್ಟೇ ಅಸೋಸಿಯೇಷನ್ ಜಿಲ್ಲಾ ಮಾಧ್ಯಮ ಉಸ್ತುವಾರಿ ಹೊಲದಗದ್ದೆ ಗಿರೀಶ್ ಆಗ್ರಹಿಸಿದ್ದಾರೆ.