ನಾಡಿನ ಪಾರಂಪರೆ, ಸಂಸ್ಕಾರ ಉಳಿಸುವ ಸದುದ್ದೇಶದಿಂದ ಪ್ರತಿಭಾ ಕಾರಂಜಿ ಬಹುಮುಖ್ಯ: ಸಿ.ಆರ್.ಅನಂತಪ್ಪತರೀಕೆರೆ, ಆಧುನಿಕ ಜಗತ್ತಿನಲ್ಲಿ ಪಾಶ್ಚಾತ್ಯ ಸಂಸ್ಕೃತಿಗೆ ಮಾರುಹೋಗುತ್ತಿರುವ ಈ ಸಂದರ್ಭದಲ್ಲಿ ಸರ್ಕಾರ ಪ್ರಾಥಮಿಕ ಹಂತ ದಲ್ಲಿಯೇ ನಮ್ಮ ನಾಡಿನ ಪಾರಂಪರಿಕ ಸಂಸ್ಕೃತಿ ಮತ್ತು ಸಂಸ್ಕಾರಗಳನ್ನು ಉಳಿಸುವ ಸದುದ್ದೇಶದಿಂದ ಪ್ರತಿಭಾ ಕಾರಂಜಿ ಬಹುಮುಖ್ಯ ವೇದಿಕೆಯಾಗಿದೆ ಎಂದು ರಾಜ್ಯ ಸರ್ಕಾರಿ ನೌಕರರ ಸಂಘದ ತಾಲೂಕು ಅಧ್ಯಕ್ಷ ಸಿ.ಆರ್. ಅನಂತಪ್ಪ ಹೇಳಿದರು.