ಮಲೆನಾಡಿನಲ್ಲಿ ರೈತರ ಮೇಲಿನ ದೌರ್ಜನ್ಯ ಖಂಡಿಸಿ 17 ಕ್ಕೆ ಬೃಹತ್ ಪ್ರತಿಭಟನೆಶೃಂಗೇರಿ, ರಾಜ್ಯ ಸರ್ಕಾರವೂ ಮಲೆನಾಡಿನ ರೈತರು, ನಾಗರಿಕರ ಮೇಲೆ ಒಂದಾದ ಮೇಲೊಂದರಂತೆ ಕಠಿಣ ಕಾನೂನುಗಳನ್ನು ಬಿಗಿಗೊಳಿಸಿ ಬದುಕಿನ ಜೊತೆ ಚೆಲ್ಲಾಟವಾಡುತ್ತಾ ದೌರ್ಜನ್ಯ ನಡೆಸುತ್ತಿದೆ. ಸರ್ಕಾರದ ಈ ನೀತಿಯನ್ನು ಖಂಡಿಸಿ ಆಗಸ್ಟ್ 17 ರಂದು ಬೃಹತ್ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ ಎಂದು ಮಲೆನಾಡು ನಾಗರಿಕ, ರೈತ ಹಿತರಕ್ಷಣಾ ಸಮಿತಿಯ ಎಂ.ಎಸ್.ನಾಗೇಶ್ ಹೇಳಿದರು.