ಮಾನವನ ಬದುಕು ದೀಪದಂತೆ ಪರಿಶುದ್ಧವಾಗಬೇಕು: ರಂಭಾಪುರಿ ಶ್ರೀಬಾಳೆಹೊನ್ನೂರು, ಮನುಷ್ಯ ಜೀವನದಲ್ಲಿ ನೋವು, ನಲಿವು ಪಾಪ, ತಾಪ ಸುಖ,ದುಃಖ ಯಾರನ್ನೂ ಬಿಟ್ಟಿಲ್ಲ. ಬಹಿರಂಗ ಸಂಪತ್ತು ಒಂದಿಲ್ಲ ಒಂದು ದಿನ ಮನುಷ್ಯನನ್ನು ಬಿಟ್ಟು ಹೋಗುತ್ತದೆ. ಮನುಷ್ಯ ಜಾಗೃತನಾಗಿ ಧರ್ಮ ಮಾರ್ಗದಲ್ಲಿ ನಡೆದರೆ ಮಾನವನ ಬದುಕು ದೀಪ ದಂತೆ ಪರಿಶುದ್ಧವಾಗುತ್ತದೆ ಎಂದು ಶ್ರೀ ರಂಭಾಪುರಿ ಡಾ.ವೀರಸೋಮೇಶ್ವರ ಜಗದ್ಗುರು ಹೇಳಿದರು.