ಎಲ್ಲೆಡೆ ಭೂ ಕುಸಿತ: ಅಪಾಯದ ಕರೆ ಗಂಟೆಶೃಂಗೇರಿ, ಮಡಿಕೇರಿ, ಕೊಡಗು, ಶಿರೂರು ವಯನಾಡು ಗುಡ್ಡಬೆಟ್ಟಗಳ ಕುಸಿತದಂತಹ ಘಟನೆಗಳ ನಂತರ ಇದೀಗ ಶಾಂತವಾಗಿದ್ದ ಮಲೆನಾಡು ಪ್ರದೇಶಗಳಲ್ಲಿಯೂ ಬೆಟ್ಟಗುಡ್ಡ, ರಸ್ತೆ ಸೇರಿದಂತೆ ಆಗುತ್ತಿರುವ ಭೂ ಕುಸಿತಗಳು ಜನರ ಬದುಕನ್ನೇ ಅಲ್ಲೋಲ ಕಲ್ಲೋಲ ಮಾಡುತ್ತಿವೆ. ಬೆಟ್ಟಗುಡ್ಡಗಳು ಜಾರಿ ಕೆಳ ಬರುತ್ತಿದೆ, ರಸ್ತೆಗಳು ಕುಸಿದು ಕಂದಕಕ್ಕೆ ಉರುಳುತ್ತಿವೆ. ಬೆಟ್ಟಗುಡ್ಡಗಳ ಅಂಚಿನ ಜನರು ಜೀವಭೀತಿಯಿಂದ ಬದುಕುವ ಆತಂತ್ರ ಪರಿಸ್ಥಿತಿ ನಿರ್ಮಾಣವಾಗಿದೆ.