ಮಲೆನಾಡಲ್ಲಿ ಮಳೆ ಅಬ್ಬರ: 6 ತಾಲೂಕುಗಳ ಶಾಲೆಗೆ ಇಂದು ರಜೆಚಿಕ್ಕಮಗಳೂರು, ಜಿಲ್ಲೆಯಲ್ಲಿ ಗುರುವಾರವೂ ಮಳೆ ಆರ್ಭಟ ಜೋರಾಗಿತ್ತು. ದಟ್ಟವಾದ ಮಳೆ, ನಿರಂತರವಾಗಿ ಸುರಿಯುವ ಮಳೆ, ಭಾರೀ ಗಾಳಿಗೆ ಧರೆಗುರುಳುತ್ತಿರುವ ಮರ, ವಿದ್ಯುತ್ ಕಂಬಗಳು, ತುಂಬಿ ಹರಿಯುತ್ತಿರುವ ನದಿಗಳು, ಹಲವು ಪ್ರದೇಶಗಳು ಜಲಾವ್ರತವಾಗಿ ಇಡೀ ದಿನ ಕಾಫಿಯ ನಾಡಿನಲ್ಲಿ ಜನಜೀವನ ಅಸ್ತವ್ಯಸ್ತವಾಗಿತ್ತು.