ಬಸ್ ನಿಲ್ದಾಣ ಕೆಸರುಮಯ : ಸಸಿ ನೆಟ್ಟು ಪ್ರತಿಭಟನೆಚಿಕ್ಕಮಗಳೂರು, ನಗರದ ಗ್ರಾಮೀಣ ಬಸ್ ನಿಲ್ದಾಣ ಕೆಸರುಮಯವಾಗಿದೆ. ದುರಸ್ತಿಗೆ ಆಗ್ರಹಿಸಿದರೂ ಜಿಲ್ಲಾಡಳಿತ ಯಾವುದೇ ಕ್ರಮ ಕೈಗೊಳ್ಳದ ಹಿನ್ನೆಲೆಯಲ್ಲಿ ಭೀಮ್ ಆರ್ಮಿ, ಕನ್ನಡಪರ ಹಾಗೂ ದಲಿತ ಒಕ್ಕೂಟಗಳ ಸಂಘಟನೆಗಳ ನೇತೃತ್ವದಲ್ಲಿ ಬೇಸಾಯ ನಡೆಸಿ, ಭತ್ತದ ಸಸಿಗಳು ನೆಟ್ಟು ಗುರುವಾರ ವಿನೂತನ ಪ್ರತಿಭಟನೆ ನಡೆಯಿತು.