ಅಜ್ಜಂಪುರಕ್ಕೆ ನ.2ರಂದು ಕನ್ನಡ ಜ್ಯೋತಿ ರಥಯಾತ್ರೆ: ಚಂದ್ರಪ್ಪಅಜ್ಜಂಪುರ, ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ಅಭಿಯಾನದ ಹಿನ್ನಲೆಯಲ್ಲಿ ಜಿಲ್ಲೆಗೆ ಕನ್ನಡ ಜ್ಯೋತಿ ಹೊತ್ತ ಕನ್ನಡ ರಥಯಾತ್ರೆ ನವೆಂಬರ್ 1 ರಂದು ಆಗಮಿಸಲಿದ್ದು ಅಜ್ಜಂಪುರ ತಾಲೂಕಿಗೆ ನ. 2 ರಂದು 11 ಘಂಟೆಗೆ ಕಡೂರಿನಿಂದ ಆಗಮಿಸಲಿರುವ ಈ ರಥವನ್ನು ಅದ್ಧೂರಿಯಾಗಿ ಬರಮಾಡಿಕೊಂಡು ಗೌರವ ಸಲ್ಲಿಸಬೇಕೆಂದು ತಾಲೂಕು ಕಸಾಪ ಅಧ್ಯಕ್ಷ ಎಚ್.ಆರ್. ಚಂದ್ರಪ್ಪ ತಿಳಿಸಿದರು.