ಕಾಫಿ ಮಂಡಳಿಗೆ ₹307.80 ಕೋಟಿ ನೆರವು: ದಿನೇಶ್ ದೇವವೃಂದಚಿಕ್ಕಮಗಳೂರು, ಕೇಂದ್ರ ಸರ್ಕಾರದ ವಾಣಿಜ್ಯ ಸಚಿವಾಲಯವು 2024- 25 ನೇ ಸಾಲಿನಲ್ಲಿ ಕಾಫಿ ಮಂಡಳಿಗೆ ₹307.80 ಕೋಟಿ ನೆರವು ನೀಡಿದೆ ಎಂದು ಮಂಡಳಿ ಅಧ್ಯಕ್ಷ ದಿನೇಶ್ ದೇವವೃಂದ ತಿಳಿಸಿದರು. ಶುಕ್ರವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಈ ಮೊತ್ತವು 2023-24 ನೇ ಸಾಲಿಗಿಂತ ಶೇ.36 ರಷ್ಟು ಹೆಚ್ಚಾಗಿದೆ. 2023-24 ನೇ ಸಾಲಿನಲ್ಲಿ ವಿವಿಧ ಯೋಜನೆಯ ಸಹಾಯಧನಕ್ಕೆ ಮಂಡಳಿಗೆ ₹62.70 ಕೋಟಿ ಸಹಾಯಧನ ದೊರೆತಿದ್ದರೆ, 2024-25 ರಲ್ಲಿ ₹90 ಕೋಟಿ ಸಹಾಯಧನ ದೊರೆತಿದೆ. ಇದು ಶೇ.40 ರಷ್ಟು ಹೆಚ್ಚಾಗಿದೆ ಎಂದು ಹೇಳಿದರು.