ವಾಡಿಕೆಗೂ ಮೀರಿ ಸುರಿದ ಮಳೆಯಿಂದ ಬಿತ್ತನೆಗೆ ಅಡ್ಡಿಚಿಕ್ಕಮಗಳೂರು, ಈ ಬಾರಿಯ ಹಿಂಗಾರು ಮಳೆ ಹಾಗೂ ರೈತರ ನಡುವೆ ಜೂಟಾಟ ನಡೆಯುತ್ತಿದೆ. ಬಾ ಅಂದ್ರೆ, ಬರಲಿಲ್ಲಾ, ಈಗ ಸಾಕು ಎನ್ನುತ್ತಿದ್ದರೂ ನಿಲ್ಲುತ್ತಿಲ್ಲ, ಅಂದರೆ, ಕಳೆದ ಒಂದು ವಾರದಿಂದ ಪ್ರತಿದಿನ ಬರುತ್ತಿರುವ ಮಳೆಯಿಂದ ಕೃಷಿ ಚಟುವಟಿಕೆಗೆ ಅಡ್ಡಿಯಾಗಿದೆ. ಒಂದೆಡೆ ಮಳೆ ಬಂದಿರುವುದರಿಂದ ರೈತರು ಖುಷಿ ಯಾಗಿದ್ದರೆ, ಬಿತ್ತನೆ, ಗೊಬ್ಬರ ಹಾಕುವ ಕೆಲಸ ಹಾಗೂ ಹಸನು ಮಾಡಿರುವ ಹೋಲದಲ್ಲಿ ಬಿತ್ತನೆಗೂ ಮುನ್ನ ಬೆಳೆದು ನಿಂತಿರುವ ಕಳೆ ತೆಗೆಯಲು ಆಗುತ್ತಿಲ್ಲ. ಪ್ರತಿ ದಿನ ಮಧ್ಯಾಹ್ನ ಆರಂಭವಾಗುವ ಮಳೆ ರಾತ್ರಿಯವರೆಗೆ ಕೆಲವೆಡೆ ಬರುತ್ತಲೇ ಇದೆ.