ಕೊಪ್ಪ ಬಿಸಿಲ ಝಳಕ್ಕೆ ತಳ ಸೇರಿದ ಹಿರಿಕೆರೆ ಜಲಕಳೆದ ಬಾರಿ ಮಲೆನಾಡಿನಲ್ಲಿ ಮುಂಗಾರು ಮಳೆ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಸುರಿದ ಪರಿಣಾಮ ತಾಲೂಕಿ ನಾದ್ಯಂತ ಬರದ ಛಾಯೆ ಆವರಿಸಿದ್ದು, ಮಲೆನಾಡಿನಲ್ಲೂ ಬಯಲುಸೀಮೆ ವಾತಾವರಣ ಸೃಷ್ಟಿಯಾಗಿದೆ. ಅಂತರ್ಜಲ ಕೊರತೆಯಿಂದ ಬಾವಿ, ಬೋರ್, ಹಳ್ಳಕೊಳ್ಳಗಳ ನೀರು ಬತ್ತಿ ಹೋಗುತ್ತಿದೆ. ಪಪಂ ಮತ್ತು ಗ್ರಾಪಂ ವ್ಯಾಪ್ತಿಗಳಲ್ಲಿ ಎಂದಿನಂತೆ ನೀರು ಪೂರೈಕೆ ಸಾಧ್ಯವಾಗದೆ ೨-೩ ದಿನಕ್ಕೊಮ್ಮೆ ಕುಡಿಯುವ ನೀರನ್ನು ಪೂರೈಸಲಾಗುತ್ತಿದೆ.