ತರೀಕೆರೆ ಪ್ರದೇಶದಲ್ಲಿ ಅಂತರ್ಜಲ ತೀವ್ರ ಕುಸಿತ: ಕುಡಿವ ನೀರಿಗೂ ಹಾಹಾಕಾರಭದ್ರಾ ನದಿ ದಡದಲ್ಲೇ ತರೀಕೆರೆ ತಾಲೂಕು ಇದ್ದರೂ ಈ ಬಿರು ಬೇಸಿಗೆಯಲ್ಲಿ ಕುಡಿಯುವ ನೀರಿಗಾಗಿ ಜನ ಹಾಹಾಕಾರ ಪಡುವಂತಾಗಿದೆ. ಪ್ರತಿ ವರ್ಷ ಕಾಲಕಾಲಕ್ಕೆ ಬರಬೇಕಾದ ಮಳೆ ಬಂದರೆ ಮಾತ್ರ ತರೀಕೆರೆ ತಾಲೂಕಿನ ಕೆರೆ ಕಟ್ಟೆಗಳು-ಬಾವಿ-ಹಳ್ಳ-ಕೊಳ್ಳ ಜಲ ತೊರೆಗಳು ನೀರಿನಿಂದ ತುಂಬಿ ಹರಿದು ಸಮೃದ್ಧ ವಾಗಿರುತ್ತದೆ. ಆದರೆ ಒಂದೇ ಒಂದು ವರ್ಷ ಮಳೆ ಬಾರದಿದ್ದರೆ ಇಲ್ಲಿನ ಪರಿಸ್ಥಿತಿ ತೀವ್ರ ಬಿಗಡಾಯಿಸುತ್ತದೆ. ಜತೆಗೆ ಕಳೆದ ವರ್ಷವೂ ಸಾಕಷ್ಟು ಮಳೆ ಬಾರದಿದ್ದರಿಂದ, ಪ್ರಸಕ್ತ ವರ್ಷ ನೀರಿಗೆ ತೀವ್ರ ತೊಂದರೆ ಅನುಭವಿಸುವಂತಾಗಿದೆ.