ನಕ್ಸಲಿಸಂ ಕರಿ ನೆರಳಲ್ಲೂ ಅರಳಿದ ಪ್ರೇಮಕಥೆಚಿಕ್ಕಮಗಳೂರು, ಕೈಯಲ್ಲಿ ಬಂದೂಕು, ನೆತ್ತಿಯ ಮೇಲೆ ಮೃತ್ಯುವಿನ ಕರಿ ನೆರಳು, ಬೆಟ್ಟ ಗುಡ್ಡಗಳ ನಡುವೆ ಕಾಡಿನ ದಾರಿಯಲ್ಲಿ ಹಗಲು ರಾತ್ರಿ ನಿರಂತರ ಪ್ರಯಾಣ. ಯಾವ ಸಂದರ್ಭದಲ್ಲಿ ಪೊಲೀಸರು ಎದುರಾಗುತ್ತಾರೋ, ಗುಂಡಿನ ಚಕಮಕಿ ನಡೆಯುತ್ತದೆಯೋ, ಯಾರ ಪ್ರಾಣ ಪಕ್ಷಿ ಹಾರಿ ಹೋಗುತ್ತದೆಯೋ.., ಇಂತಹ ಪರಿಸ್ಥಿತಿಯನ್ನು ಎದುರಿಸುವ ನಕ್ಸಲೀಯರ ನಡುವೆ ಕೆಲವರು ಪ್ರೀತಿಯ ಬಲೆಗೆ ಬಿದ್ದು ಮದುವೆಯಾಗಿದ್ದಾರೆ.