ಕುಡುಕರ ಹಾವಳಿ: ನರಸಿಂಹರಾಜಪುರದ ಸ್ವಚ್ಛತೆಗೆ ಧಕ್ಕೆನರಸಿಂಹರಾಜಪುರ, ಸ್ವಚ್ಛತೆಗೆ ಹೆಸರಾದ ನರಸಿಂಹರಾಜಪುರ ಪಟ್ಟಣದ ಕೆಲವು ವಾರ್ಡುಗಳ ರಸ್ತೆಗಳ ಬದಿ, ಖಾಲಿ ನಿವೇಶನಗಳಲ್ಲಿ ಕುಡುಕರು ಖಾಲಿ ಬಾಟಲಿ, ಪ್ಲಾಸ್ಟಿಕ್ ಕವರ್ ಹಾಕಿ ನಗರದ ಅಂದವನ್ನು ಕೆಡಿಸುತ್ತಿದ್ದಾರೆ. ಪಟ್ಟಣದಲ್ಲಿ ಪ್ರತಿ ನಿತ್ಯ ಬೆಳಗಿನಜಾವ ಪೌರ ಕಾರ್ಮಿಕರು ಬಸ್ಸು ನಿಲ್ದಾಣದಿಂದ ಹಿಡಿದು 11 ವಾರ್ಡುಗಳಲ್ಲೂ ಸಂಚರಿಸುತ್ತಾ ರಸ್ತೆ, ಚರಂಡಿಗಳನ್ನು ಸ್ವಚ್ಛ ಗೊಳಿಸಿದರೂ ಇದಾವುದರ ಪರಿವೇ ಇಲ್ಲದೆ ರಾತ್ರಿಯಾಗುತ್ತಿದ್ದಂತೆ ಕತ್ತಲೆ ಪ್ರದೇಶ ಹುಡುಕಿ ಕುಡಿದು ಬಾಟಲಿಗಳನ್ನು ರಸ್ತೆ ಬದಿ ಹಾಕುವುದರಿಂದ ಎಲ್ಲೆಂದರಲ್ಲಿ ಕಸದ ರಾಶಿಯಾಗಿ ಸ್ವಚ್ಛತೆ ಧಕ್ಕೆ ಯಾಗಿದೆ