ಮೊಳಕಾಲ್ಮುರಿನ ವಿವಿಧೆಡೆ ಭರ್ಜರಿ ಮಳೆತಾಲೂಕಿನ ವಿವಿಧ ಕಡೆಯಲ್ಲಿ ಮಂಗಳವಾರ ರಾತ್ರಿ ಭರ್ಜರಿ ಮಳೆಯಾಗಿದ್ದು, ಕೃಷಿ ಜಮೀನುಗಳಿಗೆ ನೀರು ನುಗ್ಗಿ ಅಪಾರ ಪ್ರಮಾಣದ ಬೆಳೆ ನಷ್ಟ ಸಂಭವಿಸಿದೆ. ತಾಲೂಕಿನ ಕಸಬಾ ಹಾಗೂ ದೇವ ಸಮುದ್ರ ಹೋಬಳಿಯ ಎಲ್ಲಾ ಗ್ರಾಮಗಳಲ್ಲಿ ಭಾರಿ ಮಳೆಯಾಗಿದೆ. ದೇವಸಮುದ್ರ ಹೋಬಳಿಯ ಬರಿದಾಗಿದ್ದ ಚಿಕ್ಕನಹಳ್ಳಿ, ರಾಂಪುರ, ಸಿದ್ದಾಪುರ ಕೆರೆಗಳಿಗೆ ಅಪಾರ ಪ್ರಮಾಣದ ನೀರು ಹರಿದು ಬಂದಿದೆ.