ಡಿಸಿ ಕಚೇರಿ ಮುಂಭಾಗ ಓಬಣ್ಣನಹಳ್ಳಿ ಜನರ ಆರ್ತನಾದ "ಡಿಸಿ, ಎಂಎಲ್ ಎ ನಮ್ಮನ್ನು ಮನುಷ್ಯರು ಅಂತ ಅಂದ್ಕಂಡಿಲ್ಲವೇನೋ, ಮಳೆ, ಚಳಿ ಗಾಳಿ ಲೆಕ್ಕಿಸದೇ ಬದುಕುತ್ತಿದ್ದೇವೆ. ಊರು ಮುಳುಗಿ ಎಲ್ಲವನ್ನೂ ಕಳೆದುಕೊಂಡಿದ್ದೇವೆ. ಸ್ಕೂಲ್, ದೇವಸ್ಥಾನದಲ್ಲಿ ಆಶ್ರಯ ಪಡೆದಿದ್ದೇವೆ. ನಮ್ಮ ಕಷ್ಟ ಕೇಳೋಕೆ ಯಾಕೆ ಬಂದಿಲ್ಲ ಅಂತ ಅವರನ್ನೇ ಕೇಳಿ ಹೋಗೋಕೆ ದುರ್ಗಕ್ಕೆ ಬಂದಿದ್ದೇವೆ ". ಇವು ಚಿತ್ರದುರ್ಗ ತಾಲೂಕಿನ ಓಬಣ್ಣನಹಳ್ಳಿ ಗ್ರಾಮದ ಮಹಿಳೆಯರ ನೋವಿನ ನುಡಿಗಳು. ಮಳೆ ಬಂದು ಬದುಕು ಮುಳುಗಿ ಮೂರು ದಿನವಾಯ್ತು. ತಹಸಿಲ್ದಾರ್ ಕಾಟಾಚಾರಕ್ಕೆ ಭೇಟಿ ನೀಡಿ ಹೋದವರು ಮತ್ತೆ ಬಂದೇ ಇಲ್ಲ. ಭೋವಿ ಸ್ವಾಮೀಜಿ ಪ್ರತಿ ಮನೆಗಳಿಗೆ ಭೇಟಿ ನೀಡಿ ನಾವಿದ್ದೇವೆ, ಭಯಪಡದಿರಿ ಎಂದು ಹೇಳಿ ಧವಸ ಧಾನ್ಯ ಕೊಟ್ಟಿದ್ದಾರೆ. ಸ್ವಾಮೀಜಿಗಳಿಗೆ ನಾವು ಬೇಕು, ಸರ್ಕಾರಕ್ಕೆ ಬೇಡವಾ ಎಂದು ಪ್ರಶ್ನಿಸಿದರು.