ನಾಯಕನಹಟ್ಟಿ ಸರ್ಕಾರಿ ಆಸ್ಪತ್ರೆಯಲ್ಲಿ ತರಾವರಿ ತಾಪತ್ರೆನಾಯಕನಹಟ್ಟಿ ಸಮುದಾಯ ಆರೋಗ್ಯ ಕೇಂದ್ರಕ್ಕೆ ಹಿಡಿದ ವೈದ್ಯ ಸಿಬ್ಬಂದಿ ಕೊರತೆ ಗ್ರಹಣ ಇನ್ನೂ ಬಿಟ್ಟಿಲ್ಲ. ಬಡ ರೋಗಿಗಳಿಗೆ ವಿಟಮಿನ್ ಬಿ, ಪ್ಯಾರಸಿಟಮಾಲ್ ನಂತಹ ಸಾಮಾನ್ಯ ಮಾತ್ರೆಗಳೂ ಸಹ ಇಲ್ಲಿ ಸಿಗುತ್ತಿಲ್ಲ! ಹತ್ತಾರು ಕಿ.ಮೀ ದೂರದ ಹಳ್ಳಿಗಳಿಂದ ಆಸ್ಪತ್ರೆಯತ್ತ ಮುಖ ಮಾಡುವ ಬಡರೋಗಿಗಳು ಆಸ್ಪತ್ರೆಯಲ್ಲಿ ಚಿಕಿತ್ಸಾ ಸೌಲಭ್ಯ ಸಿಗದೇ ಆಡಳಿತ ವ್ಯವಸ್ಥೆಗೆ ಹಿಡಿಶಾಪ ಹಾಕುತ್ತಿದ್ದಾರೆ.