ನಗರಸಭೆ ಅಧ್ಯಕ್ಷ ಸ್ಥಾನ ಸಾವಿತ್ರಮ್ಮಗೆ ಒಲಿಯುವ ಸಾಧ್ಯತೆರಾಜ್ಯ ಸರ್ಕಾರವು ನಗರಸಭೆ ಮತ್ತು ಪುರಸಭೆ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿಯನ್ನು ಇತ್ತೀಚೆಗೆ ಪ್ರಕಟಿಸಿದ್ದು, ಚಳ್ಳಕೆರೆ ನಗರಸಭೆಯ ಅಧ್ಯಕ್ಷ, ಉಪಾಧ್ಯಕ್ಷ ಮೀಸಲಾತಿಯಲ್ಲಿ ಅಧ್ಯಕ್ಷ ಸ್ಥಾನ ಬಿಸಿಎಂ(ಬಿ) ಮಹಿಳೆಗೆ ಮೀಸಲಿದೆ. ನಗರಸಭೆಯಲ್ಲಿ 21ನೇ ವಾರ್ಡ್ನ ಸದಸ್ಯೆ ಎಂ. ಸಾವಿತ್ರಮ್ಮ ಏಕಮಾತ್ರ ಬಿಸಿಎಂ(ಬಿ) ಕೆಟಗರಿಯಲ್ಲಿ ಬರುವ ಮಹಿಳೆಯಾಗಿದ್ದು ಬಹುತೇಕ ಅಧ್ಯಕ್ಷ ಸ್ಥಾನ ಅವರಿಗೇ ಲಭಿಸುವ ಸಂಭವವಿದೆ.