ರೋಟರಿ ಭವನ ನಗರಸಭೆ ವ್ಯಾಪ್ತಿಗೆ ಪಡೆಯಲು ಅಜಯ್ ಕುಮಾರ್ ಒತ್ತಾಯನಗರದ ನೆಹರೂ ಮೈದಾನ 8 ಎಕರೆ 10 ಗುಂಟೆ ಇದ್ದು ಇದರಲ್ಲಿ ರೋಟರಿ ಭವನವಿದ್ದು, ಸದರಿ ರೋಟರಿ ಭವನದ ಜಾಗವು ನಗರಸಭೆಗೆ ಸೇರಿದ ಸ್ವತ್ತಾಗಿದೆ. ಆದರೆ ರೋಟರಿಯವರೇ ಇಷ್ಟು ದಿನ ಬಾಡಿಗೆ ವಸೂಲು ಮಾಡುತ್ತಿದ್ದು ನಗರಸಭೆ ಸ್ವತ್ತಿನ ಬಾಡಿಗೆ ವಸೂಲಿ ಮಾಡಲು ಅವರಿಗೆ ಹಕ್ಕಿಲ್ಲ. ನಗರಸಭೆ ವ್ಯಾಪ್ತಿಗೆ ಇದನ್ನು ಸೇರಿಸಬೇಕು ಎಂದು ನಗರಸಭೆ ಮಾಜಿ ಅಧ್ಯಕ್ಷ ಹಾಲಿ ಸದಸ್ಯ ಅಜಯ್ ಕುಮಾರ್ ಒತ್ತಾಯಿಸಿದರು.