ಚಳ್ಳಕೆರೆಯಲ್ಲಿ ನಗರಸಭೆಯಿಂದ ಪಾದಚಾರಿ ಮಾರ್ಗದ ಗೂಡಂಗಡಿ ತೆರವುನಗರದ ಚಿತ್ರದುರ್ಗ ರಸ್ತೆಯೂ ಸೇರಿದಂತೆ ವಿವಿಧೆಡೆಗಳಲ್ಲಿ ಫುಟ್‌ಪಾತ್ ಆಕ್ರಮಿಸಿಕೊಂಡು ಶೆಡ್ ನಿರ್ಮಿಸಿ ಸಾರ್ವಜನಿಕರು, ವಾಹನ ಓಡಾಟಕ್ಕೆ ತೊಂದರೆ ಉಂಟು ಮಾಡುತ್ತಿದ್ದ ಹಿನ್ನೆಲೆ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ನಗರಸಭೆ ಆಡಳಿತ ಬುಧವಾರ ಬೆಳ್ಳಂಬೆಳಗ್ಗೆ ಮಿಂಚಿನ ವೇಗದಲ್ಲಿ ಪಾದಚಾರಿ ಮಾರ್ಗದ ತೆರವು ಕಾರ್ಯಾಚರಣೆ ನಡೆಸಿತು.