ಸವಿತಾ ಸಮಾಜ ಶೀಲವಂತ ಸಮಾಜ: ಶಾಸಕಶೀಲವಂತ ಸಮಾಜ ಎನ್ನುವ ಹೆಸರಿದ್ದರೆ ಅದು ಸವಿತಾ ಸಮಾಜಕ್ಕೆ ಮಾತ್ರ. ಹಾಗಾಗಿ ನೀವುಗಳು ನಿಮ್ಮ ಜಾತಿಯನ್ನು ಹೇಳಿಕೊಳ್ಳಲು ಹಿಂಜರಿಯುವುದು ಬೇಡ. ಬಿಹಾರದಂತ ದೊಡ್ಡ ರಾಜ್ಯದ ನಿಮ್ಮ ಸಮಾಜಕ್ಕೆ ಸೇರಿದ ಕರ್ಪೂರಿ ಠಾಕೂರ್ರವರನ್ನು ಮುಖ್ಯಮಂತ್ರಿಯನ್ನಾಗಿ ಮಾಡಲಾಗಿತ್ತು. ದೇಶದ ಪ್ರಧಾನಿ ನರೇಂದ್ರ ಮೋದಿ ಅವರು ನಿಮ್ಮ ಸಮಾಜವನ್ನು ಎತ್ತರಕ್ಕೆ ಕೊಂಡೊಯ್ಯಬೇಕೆಂಬ ದೃಷ್ಟಿಯಿಂದ ಕರ್ಪೂರಿ ಠಾಕೂರ್ಗೆ ಮರಣೋತ್ತರ ಭಾರತ ರತ್ನ ಪ್ರಶಸ್ತಿ ನೀಡಿ ಗೌರವಿಸಿದ್ದಾರೆ. ಮದ್ಯಪಾನ ನಿಷೇಧ ಮಾಡಿದ ಹೆಗ್ಗಳಿಕೆ ಕರ್ಪೂರಿ ಠಾಕೂರ್ಗೆ ಸಲ್ಲುತ್ತದೆ.