ಭದ್ರಾ ಮೇಲ್ದಂಡೆ: ಹಿರಿಯೂರು ಬಂದ್ಗೆ ಪೂರ್ಣ ಬೆಂಬಲಭದ್ರಾ ಮೇಲ್ದಂಡೆ ಕಾಮಗಾರಿ ಶೀಘ್ರ ಪೂರ್ಣಗೊಳಿಸುವಂತೆ ನೀರಾವರಿ ಅನುಷ್ಠಾನ ಹೋರಾಟ ಸಮಿತಿ ಬುಧವಾರ ಕರೆ ನೀಡಿದ್ದ ಹಿರಿಯೂರು ಬಂದ್ ಗೆ ಪೂರ್ಣ ಪ್ರಮಾಣದ ಬೆಂಬಲ ವ್ಯಕ್ತವಾಗಿದೆ. ಅಂಗಡಿ ಮುಂಗಟ್ಟು ಮುಚ್ಚಿದ್ದವು. ಬಸ್ಸುಗಳು ಊರು ಪ್ರವೇಶಿಸದೆ ಹೆದ್ದಾರಿಯಲ್ಲಿ ಹಾದು ಹೋದವು. ಇದರಿಂದಾಗಿ ಪ್ರಯಾಣಿಕರು ಪರದಾಡಬೇಕಾಯಿತು. ಶಾಲಾ ಕಾಲೇಜುಗಳು, ಕೆಲ ಬ್ಯಾಂಕುಗಳು ಮುಚ್ಚಿದ್ದವು. ಸರ್ಕಾರಿ ಕಚೇರಿಗಳು ಜನರಿಲ್ಲದೇ ಬಿಕೋ ಎಂದವು. ರಸ್ತೆಗಳು ನಿರ್ಜನವಾಗಿ ಕಂಡವು, 9 ಗಂಟೆಗೆ ವೇಳೆಗೆ ನಿಧಾನವಾಗಿ ಹಿರಿಯೂರು ಸ್ತಬ್ಧವಾಯಿತು.