ನಗರದೆಲ್ಲೆಡೆ ಪ್ರಭು ಶ್ರೀರಾಮಚಂದ್ರನ ನಾಮಸ್ಮರಣೆಮರ್ಯಾದಾ ಪುರುಷೋತ್ತಮ ಪ್ರಭು ಶ್ರೀರಾಮಚಂದ್ರ ಜನಿಸಿದ ಅಯೋಧ್ಯೆಯಲ್ಲಿ ಜ.22ರಂದು ಬಾಲರಾಮನ ಪ್ರತಿಷ್ಠಾಪನಾ ಕಾರ್ಯಕ್ರಮ ವಿಶ್ವಮಟ್ಟದಲ್ಲಿ ಗಮನಸೆಳೆದಿದೆ. ಶ್ರೀರಾಮ ಜನ್ಮಭೂಮಿ ಟ್ರಸ್ಟ್, ವಿಶ್ವ ಹಿಂದೂ ಪರಿಷತ್ ಹಾಗೂ ಹಿಂದೂಪರ ಸಂಘಟನೆಗಳ ಸಂಯುಕ್ತಾಶ್ರಯದಲ್ಲಿ ಭವ್ಯವಾದ ರಾಮಮಂದಿರದ ನಿರ್ಮಾಣವಾಗಿದ್ದು, ಕೋಟ್ಯಾಂತರ ರಾಮಭಕ್ತರು ಕಾಯುತ್ತಿದ್ದಾರೆ ನಗರದ ವಿವಿಧೆಡೆ ಬಾಲರಾಮನ ಪ್ರತಿಷ್ಠಾಪನಾ ಹಿನ್ನೆಲೆಯಲ್ಲಿ ಹಲವಾರು ಪೂಜಾ ಕಾರ್ಯಕ್ರಮ ಹಮ್ಮಿಕೊಂಡಿದೆ.