ಮಾಣೂರು ದೇವಸ್ಥಾನದಲ್ಲಿ ಸಾಮೂಹಿಕ ಆಶ್ಲೇಷಾ ಬಲಿ ಪೂಜೆಕ್ಷೇತ್ರದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಶಶಿಧರ್ ಭಟ್ ನೇತೃತ್ವದಲ್ಲಿ ಧಾರ್ಮಿಕ ವಿಧಿವಿಧಾನಗಳು ನಡೆದವು. ಬೆಳಗ್ಗೆ 7.00 ರಿಂದ ದೀಪ ಪ್ರಜ್ವಲನೆ, ಭಜನೆ ಸಂಕೀರ್ತನೆ ನೆರವೇರಿತು. ಬೆಳಗ್ಗೆ 9.00 ರಿಂದ ದೇವತಾ ಪ್ರಾರ್ಥನೆ, ಸ್ವಸ್ತಿ ಪುಣ್ಯಾಹ ಆಶ್ಲೇಷಾ ಬಲಿ, ಪ್ರದಾನ ಹೋಮ, ಶ್ರೀದೇವರಿಗೆ 108 ಆಶ್ಲೇಷ ಬಲಿ ಪೂಜೆ, ಪಂಚಾಮೃತ ಸೇವೆ, ವಿಶೇಷ ತಂಬಿಲ ಸೇವೆ, ಸರ್ವ ಸೇವೆ, ಪ್ರಸನ್ನ ಪೂಜೆ, ಮಹಾ ಅನ್ನಸಂತರ್ಪಣೆ ನಡೆಯಿತು. ಸಹಸ್ರಾರು ಮಂದಿ ಭಾಗವಹಿಸಿದರು.