ಮಂಗಳೂರು ನಗರದ ಕುಡಿಯುವ ನೀರಿಗೆ ಈ ವರ್ಷ ಬರಗಾಲ ಇಲ್ಲಮಂಗಳೂರು ನಗರಕ್ಕೆ ನೀರು ಪೂರೈಕೆಯಾಗುವ, ಗರಿಷ್ಠ 6 ಮೀ. ನೀರು ಸಂಗ್ರಹಣಾ ಸಾಮರ್ಥ್ಯದ ತುಂಬೆ ಅಣೆಕಟ್ಟಿನಲ್ಲಿ ಸೋಮವಾರ ನೀರಿನ ಮಟ್ಟ 5.90 ಮೀ. ಇದೆ. ಮಂಗಳೂರು ನಗರಕ್ಕೆ ಇನ್ನೆರಡು ತಿಂಗಳು ಪೂರೈಕೆ ಮಾಡಲು ಈ ನೀರು ಧಾರಾಳ ಸಾಕು ಎಂದು ಅಧಿಕಾರಿಗಳು ಹೇಳುತ್ತಾರೆ. ಹವಾಮಾನ ಇಲಾಖೆಯ ಪ್ರಕಾರ ಮೇ 2ನೇ ವಾರದ ಬಳಿಕ ಮಳೆ ಆರಂಭವಾಗುವ ನಿರೀಕ್ಷೆಯಿದೆ.