ಬಪ್ಪನಾಡು ಜಾತ್ರೆ ಮಹಾ ರಥೋತ್ಸವ ಸಂಭ್ರಮ: ಹೊಂಡಕ್ಕೆ ಸಿಲುಕಿದ ರಥದ ಚಕ್ರಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ವಾರ್ಷಿಕ ಜಾತ್ರೆ ಪ್ರಯುಕ್ತ ಭಾನುವಾರ ರಾತ್ರಿ ದೇವರ ಉತ್ಸವ ಬಲಿ, ಸ್ವರ್ಣ ಪಲ್ಲಕಿ ಉತ್ಸವ, ಬ್ರಹ್ಮರಥೋತ್ಸವ, ಸುಡುಮದ್ದು ಪ್ರದರ್ಶನ, ಸೂಟೆದಾರ ನೆರವೇರಿತು. ಸೋಮವಾರ ಪ್ರಾತಃಕಾಲ ರಥದಿಂದ ದೇವರು ಇಳಿದು ಜಳಕವಾಗಿ ಬಳಿಕ ದೇವಳಕ್ಕೆ ಬಂದು ಜಳಕದ ಬಲಿಯಾಗಿ ಧ್ವಜಾವರೋಹಣದ ಮೂಲಕ ಜಾತ್ರೆ ಸಂಪನ್ನಗೊಂಡಿತು.