ಒಂದೇ ಗಂಟೆಯ ಮಳೆಗೆ ಮಂಗಳೂರು ಅಸ್ತವ್ಯಸ್ತ!ಮಂಗಳೂರು ನಗರದಲ್ಲಿ ಸುಮಾರು ಏಳು ಗಂಟೆಯಿಂದ ಸಾಧಾರಣವಾಗಿ ಆರಂಭವಾದ ಮಳೆ ಎಂಟು ಗಂಟೆಯ ಬಳಿಕ ಧಾರಾಕಾರ ಸುರಿಯತೊಡಗಿತು. ನಗರದ ಅಲ್ಲಲ್ಲಿ ರಸ್ತೆ ಅಗೆದು ಹಾಕಿರುವುದು, ಚರಂಡಿಗಳ ಹೂಳೆತ್ತದೆ ಇರುವುದು, ಅವೈಜ್ಞಾನಿಕ ಕಾಮಗಾರಿಗಳಿಂದಾಗಿ ಹೆಚ್ಚಿನ ರಸ್ತೆಗಳಲ್ಲಿ ನೀರು ನಿಂತು ಸವಾರರು ಪರದಾಡಬೇಕಾಯಿತು.