ಉಪ್ಪಿನಂಗಡಿ ನೇತ್ರಾವತಿ ಒಡಲಲ್ಲಿರುವ ಉದ್ಭವಲಿಂಗಕ್ಕೆ ಪೂಜೆ ನಿಲ್ಲಬಾರದುಪ್ರಶ್ನಾ ಚಿಂತನೆಯ ವೇಳೆ ಪುರಾಣ ಪ್ರಸಿದ್ಧ ಉಪ್ಪಿನಂಗಡಿ ಕ್ಷೇತ್ರದಲ್ಲಿ ನದಿ ಗರ್ಭದಲ್ಲಿನ ಉದ್ಭವ ಲಿಂಗವೇ ಶ್ರೀ ದೇವರ ಮೂಲ ಬಿಂಬವಾಗಿದ್ದು, ಸರ್ವ ಕಾಲದಲ್ಲಿಯೂ ಪೂಜೆ ಸಲ್ಲಿಸುವ ಸಲುವಾಗಿ ನದಿ ದಡದಲ್ಲಿ ಸಹಸ್ರಲಿಂಗೇಶ್ವರನಿಗೆ ದೇವಾಲಯವನ್ನು ನಿರ್ಮಿಸಲಾಗಿತ್ತು. ಈ ಕಾರಣಕ್ಕೆ ಉದ್ಭವಲಿಂಗದ ಪೂಜೆಯನ್ನು ನಿರ್ಲಕ್ಷಿಸುವಂತಿಲ್ಲ ಎಂದು ತಿಳಿಸಲಾಯಿತು.