ಇಂದಿನಿಂದ ಮೈಲಾರಲಿಂಗೇಶ್ವರ ದೇಗುಲದಲ್ಲಿ ಫೆ.2ರವರೆಗೆ ವಿವಿಧ ಧಾರ್ಮಿಕ ಕಾರ್ಯಕ್ರಮನ್ಯಾಮತಿ ಪಟ್ಟಣದ ಶ್ರೀ ಮೈಲಾರಲಿಂಗೇಶ್ವರ ದೇವಸ್ಥಾನದಲ್ಲಿ ದೀಪಾಲೆ ಪ್ರತಿಷ್ಠಾಪನೆ, ಧ್ವಜಾರೋಹಣ, ನೂತನ ದೇವಸ್ಥಾನ ಗೃಹಪ್ರವೇಶ, ಶ್ರೀ ಮೈಲಾರಲಿಂಗೇಶ್ವರ ಸ್ವಾಮಿ, ಶ್ರೀ ಗಂಗಾಮಾತಮ್ಮದೇವಿ, ಶ್ರೀ ಪಂಚಮುಖಿ ಗಣಪತಿ ವಿಗ್ರಹಗಳ ಪ್ರತಿಷ್ಠಾಪನೆ ಹಾಗೂ ಕಳಸಾರೋಹಣ ಕಾರ್ಯಕ್ರಮಗಳು ಡಿ24ರಿಂದ ಫೆ.2ರವರೆಗೆ ನಡೆಯಲಿವೆ ಎಂದು ಮೈಲಾರಲಿಂಗೇಶ್ವರ ಭಕ್ತ ಮಂಡಳಿ ತಿಳಿಸಿದೆ.