ಇಂದಿನ ಯುವಜನರು ಕುಸ್ತಿಯಲ್ಲಿ ಸಾಧನೆ ಮೆರೆಯಲಿಜನಪದ ಕಲೆಗಳಲ್ಲಿಯೇ ಶ್ರೇಷ್ಠವಾದ ಕುಸ್ತಿ ಕಲೆಯನ್ನು ಉಳಿಸಿ, ಬೆಳೆಸಬೇಕಾದ ಜವಾಬ್ದಾರಿ ಇಂದಿನ ಯುವಜನಾಂಗದ ಮೇಲಿದೆ. ಕುಸ್ತಿಯಂತಹ ದೇಶಿ ಕ್ರೀಡೆ ಮರೆಯಾಗುತ್ತಿದ್ದು, ಅದರ ಬದಲಿಗೆ ಆರ್ಕೇಸ್ಟ್ರಾ, ಕುಣಿತ, ನೆಗೆತದಂತಹ ಮನೋರಂಜನೆಗಳಿಗೆ ಜನ ಮಾರುಹೋಗುತ್ತಿದ್ದಾರೆ ಎಂದು ಪೈಲ್ವಾನ್ ಸಂಗಪ್ಪ ಪುತ್ರರೂ ಆಗಿರುವ ಮಾಯಕೊಂಡ ಕ್ಷೇತ್ರ ಶಾಸಕ ಕೆ.ಎಸ್.ಬಸವಂತಪ್ಪ ಚನ್ನಗಿರಿಯಲ್ಲಿ ಅಭಿಪ್ರಾಯಪಟ್ಟಿದ್ದಾರೆ.