ಮುನಿರತ್ನ ಕಟ್ಟುಕತೆ ಜನತೆ ನಂಬಲ್ಲ: ಸೈಯದ್ ಟೀಕೆಶಾಸಕ ಮುನಿರತ್ನ ಮೇಲೆ ಅಧಿಕಾರಕ್ಕೋಸ್ಕರ ಎಚ್‌ಐವಿ ಸೋಂಕಿತರನ್ನು ಬಳಸಿ ಹನಿಟ್ರ್ಯಾಪ್ ಆರೋಪ ಕೇಳಿಬಂದಿತ್ತು. ಮಾಜಿ ಮುಖ್ಯಮಂತ್ರಿಗಳಿಬ್ಬರು, ನಾಯಕರನ್ನು ಖೆಡ್ಡಾಕ್ಕೆ ಕೆಡವಲು ಯತ್ನಿಸಿದ್ದ ಬಗ್ಗೆ ಮಹಿಳೆ ಆರೋಪ ಮಾಡಿದ್ದರು. ಆದರೆ, ಈಗ ಮೊಟ್ಟೆ ಎಸೆತದ ಬಗ್ಗೆ ಹೊಸ ನಾಟಕ ಮಾಡುತ್ತಿದ್ದಾರೆ. ಅತ್ಯಾಚಾರ ಕೇಸ್‌ನಲ್ಲಿ ಜೈಲು ಸೇರಿ, ಹೊರಗೆ ಬಂದಿರುವ ಶಾಸಕ ಮುನಿರತ್ನ ಕಟ್ಟುಕಥೆ ನಂಬುವಷ್ಟ ಕರ್ನಾಟಕದ ಜನರು ಮೂರ್ಖರಲ್ಲ ಎಂದು ಅಖಿಲ ಭಾರತ ರಾಷ್ಟ್ರೀಯ ಯುವ ಕಾಂಗ್ರೆಸ್ ಕಾರ್ಯದರ್ಶಿ ಸೈಯದ್ ಖಾಲಿದ್ ಅಹ್ಮದ್ ಟೀಕಿಸಿದ್ದಾರೆ.