ಮನೆ ಮನೆಗಳಲ್ಲಿ ಅಂಬಿಗರ ಚೌಡಯ್ಯ ಜಯಂತಿ ಆಚರಿಸಿಅಂಬಿಗರ ಚೌಡಯ್ಯನವರ ವಿಚಾರ, ವಚನಗಳಿಂದ ಗಂಗಾಮತಸ್ಥ ಸಮಾಜದವರು ರಾಜ್ಯದಲ್ಲಿ ಒಂದಾಗುವ ಶಕ್ತಿ ಬಂದಿದೆ. ಸರ್ಕಾರ ಕೂಡ ಅಂಬಿಗರ ಚೌಡಯ್ಯ ಜಯಂತಿ ಆಚರಣೆ ಮಾಡುತ್ತಿದೆ. ಆದ್ದರಿಂದ ಗಂಗಾಮತಸ್ಥರ ಪ್ರತಿ ಮನೆ ಮನೆಯಲ್ಲೂ ಅಂಬಿಗರ ಚೌಡಯ್ಯ ಜಯಂತಿ ಆಚರಿಸುವಂತಾಗಬೇಕು ಎಂದು ಸುಕ್ಷೇತ್ರ ಶ್ರೀ ಅಂಬಿಗರ ಚೌಡಯ್ಯ ಗುರುಪೀಠದ ಪೀಠಾಧಿಪತಿ ಶ್ರೀ ಶಾಂತಭೀಷ್ಮ ಚೌಡಯ್ಯ ಸ್ವಾಮೀಜಿ ನುಡಿದಿದ್ದಾರೆ.