ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರದ ವ್ಯಾಪ್ತಿಗೆ ಬರುವ ಗ್ರಾಮಗಳುಹರಿಹರ: ನಗರಸಭೆಯ ಆವರಣದಲ್ಲಿ ನೂತನವಾಗಿ ಕಾರ್ಯಾರಂಭಿಸಿರುವ ದಾವಣಗೆರೆ-ಹರಿಹರ ನಗರಾಭಿವೃದ್ಧಿ ಪ್ರಾಧಿಕಾರ ಕಚೇರಿ ವ್ಯಾಪ್ತಿಗೆ, ಹರಿಹರ ನಗರ ಸೇರಿದಂತೆ ಗ್ರಾಮಾಂತರ ಪ್ರದೇಶಗಳಾದ ಸಾಲುಕಟ್ಟೆ, ಬೆಳ್ಳೂಡಿ, ಷಂಶಿಪುರ, ದೊಗ್ಗಳ್ಳಿ, ಬನ್ನಿಕೊಡು, ಕೆ.ಬೇವಿನಹಳ್ಳಿ, ಗುತ್ತೂರು, ಬಕ್ಕಾಪುರ, ಹರ್ಲಾಪುರ, ಅಮರಾವತಿ, ಶೇರಾಪುರ, ಮಿಟ್ಲಕಟ್ಟಿ, ಮಹಜೇನಹಳ್ಳಿ, ಹನಗವಾಡಿ, ಹರಗನಹಳ್ಳಿ, ಹಲಸಬಾಳು ಗ್ರಾಮಗಳು ಒಳಪಡುತ್ತವೆ ಎಂದು ದೂಡಾ ಪ್ರಾಧಿಕಾರದ ಆಯುಕ್ತರಾದ ಹುಲ್ಮನಿ ತಿಮ್ಮಣ್ಣ ಹೇಳಿದರು.