ರಸಗೊಬ್ಬರ ಬದಲು ಹಸಿರೆಲೆ ಗೊಬ್ಬರ ಬಳಸಿ: ರಾಜಶೇಖರಪ್ಪಕೃಷಿಯಲ್ಲಿ ಹೆಚ್ಚಿನ ಪ್ರಮಾಣದ ರಸಗೊಬ್ಬರಗಳನ್ನು ಉಪಯೋಗಿಸಿದರೆ ಮಣ್ಣಿನ ಫಲವತ್ತತೆ ಕಳೆದುಹೋಗುವುದು. ಆದ್ದರಿಂದ ರೈತರು ಸೆಣಬು, ಡಯಾಂಚ, ಅಲಸಂದೆ ಬೆಳೆಗಳನ್ನು ಬೆಳೆದು ಮಣ್ಣಿನಲ್ಲಿ ಬೆರೆಸುವ ಮೂಲಕ ನೆಲದಲ್ಲಿ ಸಾವಯವ ಅಂಶವನ್ನು ಹೆಚ್ಚಿಸಬಹುದು ಎಂದು ಸಹಾಯಕ ಕೃಷಿ ನಿರ್ದೇಶಕ ಎಸ್.ಬಿ. ರಾಜಶೇಖರಪ್ಪ ಹರಿಹರದಲ್ಲಿ ಹೇಳಿದ್ದಾರೆ.