ಕಾಯಕ, ದಾಸೋಹಕ್ಕೆ ಆದ್ಯತೆ ನೀಡಿದ್ದ ಶಿವಶರಣರು12ನೇ ಶತಮಾನದ ಶರಣರು ಕಾಯಕಕ್ಕೆ ಹೆಚ್ಚಿನ ಆದ್ಯತೆ ನೀಡುತ್ತಿದ್ದರು. ಅದರಿಂದ ದೊರೆಯುತ್ತಿದ್ದ ಆದಾಯದಿಂದ ದಾಸೋಹ ನೆರವೇರಿಸುತ್ತ, ಸೌಹಾರ್ದತೆ ಮೆರೆಯುತ್ತಿದ್ದರು. ತಾರತಮ್ಯ ಎಣಿಸದೇ ಸರ್ವರನ್ನು ಸಮಾನ ಭಾವದಿಂದ ಕಾಣುವಂತಹ ಕಾಲ ಅದಾಗಿತ್ತು ಎಂದು ರಾಜ್ಯ ಮಾನವ ಬಂಧುತ್ವ ವೇದಿಕೆಯ ಸಂಚಾಲಕ ಎ.ಬಿ. ರಾಮಚಂದ್ರಪ್ಪ ಹೇಳಿದ್ದಾರೆ.