ಅರ್ಹ ವಿಕಲಚೇತನರಿಗೆ ಸೌಲಭ್ಯ ಕಲ್ಪಿಸಲು ಶ್ರಮಿಸಿ: ಚಿದಾನಂದಜಗಳೂರು ತಾಲೂಕಿನಲ್ಲಿ ಮೂರು ಸಾವಿರಕ್ಕಿಂತ ಅಧಿಕ ವಿಕಲಚೇತನರಿದ್ದು, ಸರ್ಕಾರದಿಂದ ಅನೇಕ ಸೌಲಭ್ಯಗಳು ಇವೆ. ತಾಲೂಕು, ಜಿಲ್ಲೆ ಸೇರಿದಂತೆ ರಾಜ್ಯದಲ್ಲಿ ಸೌಲಭ್ಯಗಳು ಸಿಗದೇ ಇರುವ ಅನೇಕ ವಿಕಲಚೇತನರನ್ನು ಗುರ್ತಿಸಿ, ಸವಲತ್ತುಗಳನ್ನು ಕೊಡಿಸುವ ನಿಟ್ಟಿನಲ್ಲಿ ರಾಜ್ಯ ಪ್ರಶಸ್ತಿ ವಿಜೇತ, ವಿಕಲಚೇತನ ಪತ್ರಕರ್ತ ಮಹಾಂತೇಶ್ ಬ್ರಹ್ಮ ಅವರು ಕೆಲಸ ನಿರ್ವಹಿಸಬೇಕಾಗಿದೆ ಎಂದು ಕಾರ್ಯನಿರತ ಪತ್ರಕರ್ತರ ಸಂಘದ ತಾಲೂಕು ಅಧ್ಯಕ್ಷ ಜಿ.ಎಸ್. ಚಿದಾನಂದ ಹೇಳಿದ್ದಾರೆ.