ಭಗವಂತನ ಧ್ಯಾನದಿಂದ ಜೀವನ ಸಾರ್ಥಕ: ಶ್ರೀಗಳುಸಮಯ ಎಂಬುದು ಪ್ರತಿ ಮನುಷ್ಯನ ಜೀವನದಲ್ಲಿ ಬಹಳ ಮುಖ್ಯವಾಗಿದೆ. ಬದುಕಿದಷ್ಟು ಸಮಯಕ್ಕೆ ಅರ್ಥ ಸಿಗಬೇಕಿದ್ದರೆ ಭಗವಂತನ ಧ್ಯಾನ, ಪೂಜೆ, ಸಂಸ್ಕಾರ, ಸತ್ಸಂಗಗಳಲ್ಲಿ ತೊಡಗಬೇಕು. ಆ ಮೂಲಕ ಜೀವನವನ್ನು ಸಾರ್ಥಕಗೊಳಿಸಬೇಕಾಗಿದೆ ಎಂದು ಗೋಣಿಬೀಡು ಶೀಲಸಂಪಾದನಾ ಮಠದ ಮಹಾತಪಸ್ವಿ ಸಿದ್ಧಲಿಂಗ ಮಹಾಸ್ವಾಮೀಜಿ ನ್ಯಾಮತಿಯಲ್ಲಿ ನುಡಿದಿದ್ದಾರೆ.