ಹೊನ್ನಾಳಿ ಪಟ್ಟಣದಲ್ಲಿ ಮತ್ತೆ ಹಂದಿಗಳ ದರ್ಬಾರ್!ಸಾರ್ವಜನಿಕರ ತೀವ್ರ ಒತ್ತಡ ಹಾಗೂ ಮನವಿಗಳ ಫಲವಾಗಿ ಹೊನ್ನಾಳಿ ಪಟ್ಟಣದಲ್ಲಿದ್ದ ಹಂದಿಗಳನ್ನು ಹಿಡಿದು, ಹೊರವಲಯಕ್ಕೆ ಸಾಗಿಸಲಾಗಿತ್ತು. ಅಂದಿನಿಂದ ರಸ್ತೆಗಳಲ್ಲಿ ಓಡಾಡುವ ದ್ವಿಚಕ್ರ ವಾಹನಗಳ ಸವಾರರು, ಸಾರ್ವಜನಿಕರು, ಬೀದಿ, ಗಲ್ಲಿ, ಬಡಾವಣೆಗಳ ನಿವಾಸಿಗಳು ಕೊಂಚ ನೆಮ್ಮದಿ ನಿಟ್ಟುಸಿರು ಬಿಟ್ಟಿದ್ದರು. ಆದರೆ, ಈ ನೆಮ್ಮದಿಗೆ ಮತ್ತೆ ಭಂಗ ಬಂದಿದೆ!