ಅಗತ್ಯ ಮೀರಿದ ಸಂಗ್ರಹ ಪರಿಸರಕ್ಕೆ ಮಾರಕಸುಲಭದ ಉತ್ಪಾದನೆ, ಕಡಿಮೆ ದರ ಅಥವಾ ರಿಯಾಯಿತಿ ದರದ ಮಾರಾಟದ ಹೆಸರಿನಲ್ಲಿ ನಡೆಯುವ ಮಾರುಕಟ್ಟೆ ಪ್ರಭಾವ ಸಹ ಮನುಷ್ಯನ ಅಗತ್ಯಕ್ಕೆ ಮೀರಿದ ಖರೀದಿಗೆ ಪ್ರಚೋದನೆ ನೀಡಿ, ಪರಿಸರ ಹಾನಿಗೆ ಕಾರಣವಾಗಿದೆ. ಅಗತ್ಯಕ್ಕೆ ಮೀರಿದ ಸಂಗ್ರಹವೂ ಪರಿಸರಕ್ಕೆ ಅಪಾಯಕಾರಿ ಎಂದು ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಜಿಲ್ಲಾ ಪರಿಸರ ಅಧಿಕಾರಿ ಡಾ. ಎಚ್.ಲಕ್ಷ್ಮೀಕಾಂತ ಆತಂಕ ದಾವಣಗೆರೆಯಲ್ಲಿ ವ್ಯಕ್ತಪಡಿಸಿದ್ದಾರೆ.