ಹಿಜಾಬ್ ವಿಚಾರಕ್ಕೆ ಪರೀಕ್ಷಾರ್ಥಿ ಯುವತಿ, ಪೊಲೀಸರ ಮಧ್ಯೆ ವಾಗ್ವಾದದಾವಣಗೆರೆ ನಗರದಲ್ಲಿ ಅ.26 ಮತ್ತು 27ರಂದು 5 ಪರೀಕ್ಷಾ ಕೇಂದ್ರಗಳಲ್ಲಿ ಸರ್ಕಾರಿ ಹುದ್ದೆ ನೇಮಕಾತಿಗೆ ಸ್ಪರ್ಧಾತ್ಮಕ ಪರೀಕ್ಷೆ ನಡೆಯಿತು. ಆದರೆ, ಭಾನುವಾರ ಪರೀಕ್ಷೆ ಬರೆಯಲು ಬಂದಿದ್ದ ಯುವತಿಯೊಬ್ಬಳು ಹಿಜಾಬ್ ತೆಗೆಯಲು ಒಪ್ಪದೇ, ಪೊಲೀಸರ ಜೊತೆಗೆ ತೀವ್ರ ವಾಗ್ವಾದ ಮಾಡಿದ ಘಟನೆ ಎಸ್.ಎಸ್. ಲೇಔಟ್‌ನ ರಾಘವೇಂದ್ರ ಕಾಲೇಜಿನ ಪರೀಕ್ಷಾ ಕೇಂದ್ರದಲ್ಲಿ ನಡೆದಿದೆ.