ಬನಾಯೇಂಗೆ ಮಂದಿರ್ ಹಾಡಿಗೆ ಆಕ್ಷೇಪ: ಡಿಸಿ ಗರಂ, ವ್ಯಕ್ತಿ ನರಂ!ಗಣೇಶ ವಿಸರ್ಜನಾ ಮೆರವಣಿಗೆ ವೇಳೆ ಬನಾಯೇಂಗೆ ಮಂದಿರ್ ಹಾಡು ಹಾಕಬಾರದು. ಈ ಹಾಡು ಹಾಕಿದರೆ ನಮ್ಮ ಮನಸ್ಸಿಗೆ ನೋವಾಗುತ್ತದೆ ಎನ್ನುವ ಮೂಲಕ ಸೌಹಾರ್ದತಾ ಸಭೆಯಲ್ಲಿ ಶಾಂತಿ ಕದಡಲು ಮುಂದಾದ ಮುಸ್ಲಿಂ ವ್ಯಕ್ತಿಗೆ, "ಕೇಸ್ ಜಡಿದು, ಒಳಗೆ ಹಾಕಬೇಕಾದೀತು " ಎಂದು ಜಿಲ್ಲಾಧಿಕಾರಿ ಜಿ.ಎಂ.ಗಂಗಾಧರ ಸ್ವಾಮಿ ಎಚ್ಚರಿಸಿದ ಘಟನೆ ನಡೆಯಿತು.