ಮಣ್ಣು ಮುಕ್ಕಿದ ಬಿಜೆಪಿ: ಕಾರ್ಯಕರ್ತರಲ್ಲಿ ಇನ್ನಿಲ್ಲದ ಕಡುಬೇಸರ!ಒಂದೂವರೆ ದಶಕದ ಹಿಂದೆ ತುಂಬಿದ ಮನೆಯಾಗಿ, ಅಧಿಕಾರದ ಸುವರ್ಣಯುಗ ಅನುಭವಿಸಿದ್ದ ಬಿಜೆಪಿ ಈಗ ಮನೆಯೊಂದು ಹಲವು ಬಾಗಿಲುಗಳು ಎಂಬಂತಾಗಿದೆ. ತನ್ನ ದುರ್ದಿನಗಳನ್ನು ತಾನೇ ತಂದುಕೊಂಡಿರುವುದು ಪಕ್ಷದ ಮುಖಂಡರ ಜಂಘಾಬಲವನ್ನೇ ಅಡಗಿಸಿದೆ. ಜಿಲ್ಲಾ ನಾಯಕರ ಶೀತಲಸಮರ, ಪರಸ್ಪರರಲ್ಲಿ ವಿಶ್ವಾಸ ಇಲ್ಲದ್ದು, ನನ್ನ ಅವಧಿ ಮುಗಿದಾಯ್ತಲ್ಲವೆಂಬ ಧೋರಣೆ, ನಮಗೆ ಅಧಿಕಾರ ಕೊಡಿಸಲಿಲ್ಲ ಎಂಬುದು, ಗೆಲ್ಲುವ ಕುದುರೆಗಳನ್ನೇ ಕಟ್ಟಿ ಹಾಕುವ ಹುಚ್ಚು ಸಾಹಸಕ್ಕೆ ಕೈ ಹಾಕಿದ ಹೈ ಕಮಾಂಡ್‌ನ ಅತಿಯಾದ ವಿಶ್ವಾಸ, ತಪ್ಪು ಲೆಕ್ಕಾಚಾರಗಳ ಪರಿಣಾಮ ದಾವಣಗೆರೆಯಂಥ ಭದ್ರಕೋಟೆ ಕಾಂಗ್ರೆಸ್ ಕೈ ವಶವಾಗಿದೆ ಎಂಬುದು ನೊಂದ ಕಾರ್ಯಕರ್ತರ ಮಾತು.