ಸಿದ್ಧಗಂಗಾ ವಿದ್ಯಾ ಸಂಸ್ಥೆ ವಿದ್ಯಾರ್ಥಿಗಳ ಅಮೋಘ ಸಾಧನೆ2024- 25ನೇ ಸಾಲಿನ ಕೆಸಿಇಟಿ ಫಲಿತಾಂಶ ಪ್ರಕಟಿಸಿದ್ದು, ದಾವಣಗೆರೆಯ ಸಿದ್ಧಗಂಗಾ ಪದವಿಪೂರ್ವ ವಿಜ್ಞಾನ ಕಾಲೇಜಿನ ವಿದ್ಯಾರ್ಥಿಗಳು ಅತ್ಯುತ್ತಮ ಫಲಿತಾಂಶ ನೀಡಿ ಅಮೋಘ ಸಾಧನೆಗೈದಿದ್ದಾರೆ. ಸಚಿನ್ ರಮೇಶ್ ಮಳಗಿ ಕೃಷಿ ವಿಜ್ಞಾನ ವಿಭಾಗದಲ್ಲಿ 16ನೇ ರ‍್ಯಾಂಕ್ ಪಡೆದರೆ ಸಂಜನಾ ರಾಮಪ್ಪ ಬಕ್ರಿ, ಎನ್.ಎಂ. ಸಾಗರ್, ತರನುಂ ಸುಲ್ತಾನ ಕ್ರಮವಾಗಿ 295, 502, 949ನೇ ರ‍್ಯಾಂಕ್ ಪಡೆದು ಸಂಸ್ಥೆಗೆ ಪೋಷಕರಿಗೆ ಕೀರ್ತಿ ತಂದಿದ್ದಾರೆ.