ಪಾರಂಪರಿಕ ಬೀಜಗಳ ಬಳಕೆಗೆ ಮರಳಿ: ಪದ್ಮಾವತಮ್ಮಆಧುನಿಕತೆಯ ಹೆಸರಲ್ಲಿ ರಾಸಾಯನಿಕ ಬೀಜಗಳ ಬಳಕೆಯ ಅಬ್ಬರದಿಂದಾಗಿ ನಮ್ಮದೇ ಸ್ವಂತದ ತಳಿಗಳಾದ ಪಾರಂಪರಿಕ ಬೀಜಗಳ ಬಳಕೆಯನ್ನೇ ಮರೆತು, ನಮ್ಮ ಆರೋಗ್ಯದ ಜೊತೆಗೆ ಆಯಸ್ಸನ್ನೂ ನಾವು ಕಳೆದುಕೊಳ್ಳುತ್ತಿದ್ದೇವೆ ಎಂದು ಮೈಸೂರಿನ ಬೀಜ ಸಂರಕ್ಷಕಿ ಪದ್ಮಾವತಮ್ಮ ದಾವಣಗೆರೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.