ಬರ, ಬಿಸಿಲ ಝಳಕ್ಕೆ ಒಣಗಿದ ಕಬ್ಬು, ತೆಂಗು, ಅಡಕೆನೀರಿಲ್ಲದೇ ಒಣಗಿರುವ ಕಬ್ಬಿನ ಬೆಳೆ, ತೆಂಗು, ಅಡಕೆ ಸೇರಿದಂತೆ ವಿವಿಧ ತೋಟದ ಬೆಳೆಗಳು ದಾವಣಗೆರೆ ತಾಲೂಕಿನ ಕುಕ್ಕವಾಡ ಗ್ರಾಮದ ವ್ಯಾಪ್ತಿಯಲ್ಲಿ ಸಂಪೂರ್ಣ ಒಣಗುತ್ತಿವೆ. ಸರ್ಕಾರ ತಕ್ಷಣ ಸಮೀಕ್ಷೆ ಕೈಗೊಂಡು, ಬೆಳೆ ಪರಿಹಾರ ನೀಡುವಂತೆ ಬಿಜೆಪಿ ಜಿಲ್ಲಾ ವಕ್ತಾರ, ಎಪಿಎಂಸಿ ಮಾಜಿ ಅಧ್ಯಕ್ಷ ಬಿ.ಎಂ.ಸತೀಶ ಕೊಳೇನಹಳ್ಳಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.